ಶೈಲಜಾ ಉಡಚಣ ಕನ್ನಡದ ಕವಯತ್ರಿ ಹಾಗೂ ಲೇಖಕಿ. == ಹುಟ್ಟು/ಶಿಕ್ಷಣ/ಜೀವನ == ಜನನ: ೧೯೩೫, ಜುಲೈ ೨೬. ರಾಯಚೂರು ಜಿಲ್ಲೆಯ ಉಡಚಣ, ಜನ್ಮನಾಮ ಮಹಾಂತಮ್ಮ ಹಸಮ್ ಕಲ್. ಮದುವೆ ನಂತರ ಶೈಲಜಾ ಬಸವಣ್ಣಪ್ಪ ಉಡಚಣ. ಕಾವ್ಯನಾಮ ಶೈಲಜಾ ಉಡಚಣ ೧೯೬೧ರಲ್ಲಿ ಬಸವಣ್ಣಪ್ಪ ಉಡಚಣರೊಂದಿಗೆ ಮದುವೆಯಾಗಿ ಗುಲಬರ್ಗಾದಲ್ಲಿ ನೆಲೆಸಿದರು. ನಿಜಾಮ ಕಾಲದ ರಾಯಚೂರಿನ ಮಹಿಳಾ ಹೈಸ್ಕೂಲಿನಲ್ಲಿ ಓದು. ಏಳನೇ ತರಗತಿವರೆಗೆ ಕನ್ನಡ ಮಾಧ್ಯಮ ಹಾಗೂ ಮೆಟ್ರಿಕ್ಯುಲೇಶನ್ ವರೆಗ್ ಉರ್ದು ಮಾಧ್ಯಮ. ಅನಂತರ ಇಂಟರ್ ಮೀಡಿಯೇಟ್, ಬಿ.ಎ, ಬಿ.ಎಡ್, ಎಂ.ಎ. ಪದವಿಗಳು ಖಾಸಗಿ ಅಧ್ಯಯನದ ಮೂಲಕ. == ವೃತ್ತಿಜೀವನ == ಹೈಸ್ಕೂಲ್ ಶಿಕ್ಷಕಿ ೧೯೫೯ರಲ್ಲಿ ಗುಲಬರ್ಗಾ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ನೇಮಕ. ಮೈಸೂರು ಮತ್ತು ಬೆಂಗಳೂರು ಮಹಾರಾಣಿ ಕಾಲೇಜುಗಳಲ್ಲಿ ಕಾರ್ಯನಿರ್ವಹಣೆ. ೩೫ ವರ್ಷಗಳ ಸೇವೆಯ ನಂತರ ೧೯೯೧ರಲ್ಲಿ ನಿವೃತ್ತಿ. == ಕೃತಿಗಳು == === ಕವನಸಂಕಲನ === ಒಂದು ಗಳಿಗೆ (೧೯೭೨) ಕಾದು ನೋಡು (೧೯೭೯) ಸ್ವಗತ (೧೯೮೧) ಕಪ್ಪುನೆಲ ಸೊಕಿದ ಸೂರ್ಯ (೧೯೮೭) ತುಂತುರು ಹನಿಗಳು (೧೯೯೧) ನನ್ನಂಥವರು (೧೯೯೫) === ವಚನಸಂಕಲನ === ಕೇಳುಮಗಾ (೧೯೭೭) === ಸಂಶೋಧನಾ ಗ್ರಂಥ === ವಚನಕಾರರ ದೃಷ್ಟಿಯಲ್ಲಿ ಸ್ತ್ರೀ (೧೯೭೭) === ಇತರ === ವಚನಗಳಲ್ಲಿ ಸತಿಪತಿ ಭಾವ ನನ್ನ ಲೇಖನಗಳು (೧೯೯೫) ವಚನ ಸಾಹಿತ್ಯ ಮತ್ತು ಮಹಿಳೆ ಮೂರು ಮಾತು ನೂರು ನೀತಿ ನಾನು ಮತ್ತು ಸಾಹಿತ್ಯ ಕಾಲ ನಮ್ಮ ಕೈಯಲ್ಲಿದೆ ‘ನುಡಿನೆರಳು’ (ಅಮೃತಾ ಪ್ರೀತಮ್‌ ರವರ ಅನುವಾದಿತ ಕೃತಿ) ಕೆಲವು ಕವಿತೆಗಳು ಹಿಂದಿ, ಮರಾಠಿ ಭಾಷೆಗಳಿಗೆ ಅನುವಾದಗೊಂಡಿವೆ. == ಪ್ರಶಸ್ತಿ, ಗೌರವಗಳು == ಕಲಬುರಗಿ ಜಿಲ್ಲೆಯ ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾವೈಕ್ಯ ಕವಿಗೋಷ್ಠಿಯ ಅಧ್ಯಕ್ಷತೆ. (೧೯೯೨) ಮುಧೋಳದಲ್ಲಿ ನಡೆದ ಅಖಿಲಭಾರತ ೬೬ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.(೧೯೯೫) ಗುಲಬರ್ಗಾದ ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕ್ ಸ್ಥಾಪನೆಗೆ ಹೋರಾಟಕ್ಕೆ ಇವರಿಗೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ದೊರೆತಿದೆ. ದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗ ಇವರಿಗೆ ೧೯೯೭ರ ಅತ್ತ್ಯುತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೯೫) ಅನುಪಮ ಪ್ರಶಸ್ತಿ (೧೯೯೬) ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (೨೦೦೩) == ಉಲ್ಲೇಖಗಳು == == ಹೊರಕೊಂಡಿಗಳು == ಡಾ-ಶೈಲಜಾ-ಉಡಚಣ‎, ಕಣಜ ತಾಣ